ಸಿಪಿಐ ಜಿಲ್ಲಾ ಕೌನ್ಸಿಲ್ ಕಚೇರಿ ಕಾರ್ಯದರ್ಶಿ ಕೆ. ಪದ್ಮನಾಭನ್ ನಿಧನ



ಕಾಸರಗೋಡು: ಸಿಪಿಐ ಕಾಸರಗೋಡು ಜಿಲ್ಲಾ ಕೌನ್ಸಿಲ್ ಕಚೇರಿ ಕಾರ್ಯದರ್ಶಿ ಕೆ. ಪದ್ಮನಾಭನ್ (70) ನಿಧನರಾದರು. ಅನಾರೋಗ್ಯದ ಕಾರಣ ನಾಲ್ಕು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಅವರು ಕೊನೆಯುಸಿರೆಳೆದರು.

ಇವರು ಪೆರುಂಬಳ ಚೆಟ್ಟಂಗುಳಿ ನಿವಾಸಿಯಾಗಿದ್ದಾರೆ. ಬಾಲ್ಯದಿಂದಲೇ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಇವರು ದೀರ್ಘಕಾಲದವರೆಗೆ ಪಕ್ಷದ ಜಿಲ್ಲಾ ಕೌನ್ಸಿಲ್ ಕಚೇರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕೆ.ಪಿ. ರಾಜೇಂದ್ರನ್ ಅವರು ಕಂದಾಯ ಸಚಿವರಾಗಿದ್ದ ಕಾಲದಲ್ಲಿ ಅವರ ಸಿಬ್ಬಂದಿ ವರ್ಗದ ಸದಸ್ಯರಾಗಿಯೂ ದುಡಿದಿದ್ದರು. ಮೃತರು ಪತ್ನಿ ಜಯಂತಿ, ಮಕ್ಕಳಾದ ಪಿ. ಜಿತೇಶ್ ಸರಿತ್, ಪಿ. ಸಜಿತ್, ಪಿ. ರಶ್ಮಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು